‘ಬಾರ್ ಎಕ್ಸ್ಪ್ರೆಸ್’ ಸೇವೆಗೆ ಐಆರ್‌ಬಿ ಬ್ರೇಕ್..!

0
8ank2
ಈ ಸುದ್ದಿಯನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಿ

Author

ಅಂಕೋಲಾ: ಬಾಳೆಗುಳಿಯಲ್ಲಿ ಬಾರ್ಗೆ ಹೋಗಲು ಹೆದ್ದಾರಿ ಡಿವೈಡರ್ ಒಡೆದು ದಾರಿ ಮಾಡಿಕೊಟ್ಟದ್ದ ಐಆರ್ಬಿ ಕಂಪನಿಯು ಕೊನೆಗೂ ಎಚ್ಚೆತ್ತಿದೆ. ಬಾರ್ಗೆ ಹೋಗುವವರಿಗೆ ಹೆದ್ದಾರಿಯಿಂದಲೇಡೈರೆಕ್ಟ್ ಎಂಟ್ರಿಕಲ್ಪಿಸಿದ್ದ ಐಆರ್ಬಿ ಕಂಪನಿ ಕಾರವಾರ ಟೈಮ್ಸ್ ವರದಿ ಪ್ರಕಟಿಸಿದ ಬೆನ್ನಲ್ಲೇ ಕಲ್ಲು ಸುರಿದು ದಾರಿಯನ್ನು ಮುಚ್ಚಿದೆ.

ವರದರಾಜ್ ಹೋಟೆಲ್ ಎದುರು ಹೆದ್ದಾರಿಯ ಡಿವೈಡರ್ನಲ್ಲಿ ಮಾಡಲಾಗಿದ್ದ ಬಾರ್ ಎಂಟ್ರಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಇಲ್ಲಿಯವರೆಗೆ ವಾಹನ ಸವಾರರಿಗೆ ಇದುಯೂಟರ್ನ್ಅಲ್ಲ, “ಯೂಡ್ರಿಂಕ್ ಟರ್ನ್ಎಂಬAತಾಗಿತ್ತು ಎಂಬ ಹಾಸ್ಯದ ಮಾತು ಸ್ಥಳೀಯರದ್ದಾಗಿತ್ತು. ಹಾಗೆ ಹೆದ್ದಾರಿ ಸುರಕ್ಷತೆಗಿಂತ ಬಾರ್ ಪ್ರವೇಶಕ್ಕೆ ಹೆಚ್ಚು ಆದ್ಯತೆ ನೀಡಿದಂತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.

 ಬಾರ್ಗೆ ಹೋಗಲು ದಾರಿ ಮಾಡಿಕೊಟ್ಟ ಐಆರ್ಬಿ ಎಂಬ ಶೀರ್ಷಿಕೆಯಡಿ ಕಾರವಾರ ಟೈಮ್ಸ್ ಸಮಗ್ರ ವರದಿ ಪ್ರಕಟಿಸಿತ್ತು. ಬಳಿಕ ಐಆರ್ಬಿ ಅಧಿಕಾರಿಗಳು ಎಚ್ಚೆತ್ತುಕೊಂಡು ಡಿವೈಡರ್ ಮುಚ್ಚಿದ್ದಾರೆ. ಇದರಿಂದ ಬಾರ್ಗೆ ಹೋಗುವವರು ಇನ್ನು ಮುಂದೆ ನಿಯಮಬದ್ಧ ಮಾರ್ಗವನ್ನೇ ಅನುಸರಿಸಬೇಕಾಗಿದೆ.

 ಆದರೆ ಸಾರ್ವಜನಿಕರು ಮಾತ್ರ, “ತಡವಾದರೂ ಪರವಾಗಿಲ್ಲ, ಜೀವ ಉಳಿಸುವ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ನಕಲಿಸುವ ಬದಲು ಹಂಚಿಕೊಳ್ಳಿ