ಕಂಡಕ್ಟರ್ ಲಕ್ಷ್ಮೀ ಅವರಿಂದ ರಾಖಿ ಕಟ್ಟಿಸಿಕೊಂಡ ಅಣ್ಣಂದಿರು

0
Oplus_16908288

Oplus_16908288

ಈ ಸುದ್ದಿಯನ್ನು ನಿಮ್ಮವರೊಂದಿಗೆ ಹಂಚಿಕೊಳ್ಳಿ

Author

ಅಂಕೋಲಾ: ಸಹೋದರತ್ವ, ಪ್ರೀತಿ ಹಾಗೂ ರಕ್ಷಣೆಯ ಬಂಧವನ್ನು ಸಾರುವ ರಕ್ಷಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿರ್ವಾಹಕಿ (ಕಂಡಕ್ಟರ್) ಲಕ್ಷ್ಮೀ ಅವರು ಸಾರ್ವಜನಿಕರಿಗೆ ರಾಖಿ ಕಟ್ಟಿ, ಸಹೋದರತ್ವದ ಸಂದೇಶ ಸಾರಿದರು.

ರಕ್ಷಬಂಧನದ ಅಂಗವಾಗಿ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತ ಲಕ್ಷ್ಮೀ ಅವರು, ಪುರುಷರಿಗೆ ರಾಖಿ ಕಟ್ಟುವ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದೇಶ ನೀಡಿದರು.

 ಶ್ರೀ ಕೃಷ್ಣ ವಿಲಾಸ ಮಂಜು, ನಾಗೇಂದ್ರ ದೇವಾ ನಾಯ್ಕ. ಬೇಳಾ, ಸುರೇಶ ಅಸ್ಲಗದ್ದೆ, ಸಾರಿಗೆ ಬಸ್ ಚಾಲಕ ಕಮಲಾಕ್ಷ ನಾಯ್ಕ. ಹನುಮಟ್ಟಾ, ಗಣಪತಿ ಹೊಟೇಲ ಗೋಪು, ಅರವಿಂದ ಕುಡ್ತಲಕರ, sಸತೀಶ ಹನುಮಟ್ಟಾ ಸೇರಿದಂತೆ ಮೊದಲಾದವರಿಗೆ ರಾಖಿ ಕಟ್ಟಲಾಯಿತು.

 ರಾಖಿ ಕಟ್ಟಿಸಿಕೊಂಡ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿ, ರಕ್ಷಬಂಧನವು ಕೇವಲ ಸಹೋದರಸಹೋದರಿಯರ ನಡುವಿನ ಬಂಧವಲ್ಲದೆ, ಸಮಾಜದಲ್ಲಿ ಪರಸ್ಪರ ಗೌರವ, ವಿಶ್ವಾಸ ಹಾಗೂ ಮಾನವೀಯ ಸಂಬAಧಗಳನ್ನು ಬೆಸೆಯುವ ಹಬ್ಬವಾಗಿದೆ ಎಂದು ಅಭಿಪ್ರಾಯಪಟ್ಟರು.

  ವೇಳೆ ರಕ್ಷಬಂಧನದ ಸಂಭ್ರಮದೊAದಿಗೆ ಸಾರ್ವಜನಿಕರಲ್ಲಿ ಸ್ನೇಹ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆ ಮೂಡಿಸುವ ಪ್ರಯತ್ನ ಗಮನ ಸೆಳೆಯಿತು.

Leave a Reply

Your email address will not be published. Required fields are marked *

ನಕಲಿಸುವ ಬದಲು ಹಂಚಿಕೊಳ್ಳಿ